ನಿರ್ಧಾರಣೆ -
	ಸಾಮಥ್ರ್ಯ ಏಕಮಾನಗಳಲ್ಲಿ (ಉದಾಹರಣೆಗೆ ಮೋಟರಿನ ಅಶ್ವ ಸಾಮಥ್ರ್ಯ, ನೇರ ಪ್ರವಾಹ ವಿದ್ಯುಜ್ಜನಕದ ಕಿಲೊವಾಟುಗಳು, ಪರ್ಯಾಯಕದ ಕಿಲೊವೋಲ್ಟ್ ಆಂಪೇರುಗಳು) ಇಲ್ಲವೇ ವೈಲಕ್ಷಣ್ಯಗಳಲ್ಲಿ (ಉದಾಹರಣೆಗೆ ಜವ, ವೋಲ್ಟೇಜ್, ಆರ್ವತಾಂಕ) ಹೇಳಲಾಗುವ ಯಂತ್ರವೊಂದರ ನಿರೂಪಿತ ಕಾರ್ಯ ನಿರ್ವಹಣ ಪರಿಮಿತಿ (ರೇಟಿಂಗ್). ಯಾವುದೇ ಯಂತ್ರ ಸಾಧನವನ್ನು ಕೊಳ್ಳುವುದಕ್ಕೆ ಮೊದಲು ಅದರ ಬಗ್ಗೆ ನಮಗೆ ಅನೇಕ ಮಾಹಿತಿಗಳು ತಿಳಿದಿರುವುದು ಅಗತ್ಯ. ಅದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಬಲ್ಲದು, ಅದರ ಕಾರ್ಯವ್ಯಾಪ್ತಿ ಯೇನು ನಮ್ಮ ಅಗತ್ಯಗಳಿಗೆ ಅವು ಅನುಗುಣವಾಗಿವೆಯೇ ಇಲ್ಲವೇ ಇಂಥ ಹಲವಾರು ವಿವರಗಳಿಗೆ ಲಕ್ಷ್ಯವೀಯಬೇಕಾಗುತ್ತದೆ. ಇವನ್ನು ತಿಳಿಸುವ ಪಟ್ಟಿಕೆಯನ್ನು ಯಂತ್ರದ ಚೌಕಟ್ಟಿಗೆ ಲಗತ್ತಿಸಿರುವುದು ವಾಡಿಕೆ. ಈ ವಿವರಗಳು ಯಂತ್ರ ಸಾಧನಕ್ಕೆ ಅನುಗುಣವಾಗಿ ಬೇರೆ ಬೇರೆ ಆಗಿರಬಹುದು. ಉದಾಹರಣೆಗೆ ವಿದ್ಯುದ್ಯಂತ್ರವೊಂದರಲ್ಲಿ ಉತ್ಪತ್ತಿ, ಜವ, ವೋಲ್ಟೇಜ್, ವಿದ್ಯುತ್ತು ಇವುಗಳ ವಿವರಗಳಿರುತ್ತವೆ. ಆದರೆ ಅಂರ್ತದಹನ ಯಂತ್ರದ ವಿವರಣೆಯಲ್ಲಿ ವೋಲ್ಟೇಜ್, ವಿದ್ಯುತ್ತು ಈ ವಿವರಗಳು ಬೇಕಾಗಿರುವುದಿಲ್ಲ. ಹೀಗೆ ಆಯಾ ಯಂತ್ರಕ್ಕೆ ಸಂಬಂಧಿಸಿದಂತೆ ತಿಳಿಸಿರುವ, ಈ ಮೇಲೆ ಹೇಳಿರುವ ರೀತಿಯ ವಿವರಗಳಿಗೆ, ಯಂತ್ರದ ನಿರ್ಧಾರಣೆ ಎಂದು ಹೆಸರು. ವಿವರಗಳು ನಿರ್ಧಾರಿತ ಉತ್ಪತ್ತಿ, ನಿರ್ಧಾರಿತ ಜವ, ನಿರ್ಧಾರಿತ ವೋಲ್ಟೇಜ್, ನಿರ್ಧಾರಿತ ವಿದ್ಯುತ್ತು ಎಂದೆನಿಸಿಕೊಳ್ಳುತ್ತವೆ. ಇವನ್ನು ನಿರ್ಧಾರಿತ ಬೆಲೆಗಳು ಎನ್ನುತ್ತೇವೆ.

	ಯಂತ್ರದ ನಿರ್ಧಾರಣೆ ಒಂದು ರೀತಿಯಲ್ಲಿ ಸ್ವೇಚ್ಛೆಯಾಗಿ ಆಯ್ದಿರುವ ಸುರಕ್ಷಿತ ಕಾರ್ಯಾಚರಣೆಯ ಪರಿಮಿತಿ. ಒಪ್ಪಿರುವ ಕೆಲವು ನಿಯಮಗಳು ಮತ್ತು ಶಿಷ್ಟ ಮಾನಕಗಳ ಪ್ರಕಾರ ಇದನ್ನು ನಿರ್ಧರಿಸಲಾಗುವುದು. ಇದು ಯಂತ್ರ ಸಾಮಾನ್ಯವಾಗಿ ಕಾರ್ಯಚರಣೆ ಮಾಡುವ ಪರಿಮಿತಿಯನ್ನು ಸೂಚಿಸುತ್ತದೆ. ಆದರೆ, ಆಗೊಮ್ಮೆ ಈಗೊಮ್ಮೆ ಈ ಪರಿಮಿತಿಯನ್ನು ದಾಟಿದರೂ ಯಂತ್ರಕ್ಕೆ ಅಪಾಯವಿಲ್ಲ. 

	ವಿದ್ಯುತ್ತಿನ ಕೈಗಾರಿಕೆ ಅನೇಕ ಬಗೆಯ ನಿರ್ಧಾರಣೆಗಳನ್ನು ಪುರಸ್ಕರಿಸಿದೆ :

	1. ಸತತ ನಿರ್ಧಾರಣೆ (ಕಂಟಿನ್ಯೂವಸ್ ರೇಟಿಂಗ್): ಏಕಪ್ರಕಾರವಾಗಿರುವ ಹೇರಿಕೆಯ ಪರಿಸ್ಥಿತಿ ಯಿದ್ದರೆ, ಸತತ ನಿರ್ಧಾರಣೆಯನ್ನು ಉಪಯೋಗಿಸಬಹುದು. ನಿರ್ದೇಶಿಸುವ ಹೇರಿಕೆಗಳನ್ನು ಯಂತ್ರ ಅನಿದಿಷ್ಟ ದೀರ್ಘ ಕಾಲಾವಧಿಯ ತನಕ ತಾಳಿಕೊಳ್ಳಬಹುದು ಎಂದು ಇದರ ಅರ್ಥ. ಬೇರೆ ರೀತಿ ತಿಳಿಸದಿದ್ದರೆ ಯಂತ್ರವನ್ನು ಸತತ ಸೇವೆಗೆ ನಿರ್ಧಾರಣೆ ಮಾಡಿದ್ದಾರೆಂದೇ ಸಾಮಾನ್ಯವಾಗಿ ತಿಳಿಯಬಹುದು.

	2. ಅಲ್ಪಾವಧಿ ನಿರ್ಧಾರಣೆ (ಶಾರ್ಟ್ ಟರ್ಮ್ ರೇಟಿಂಗ್): ಇದು ಅಲ್ಪಾವಧಿ ಮತ್ತು ನಿಶ್ಚಿತವಾಗಿ ನಿರ್ದೇಶಿಸಿದ ಕಾಲಾವಧಿಯಿರುವ ಹೇರಿಕೆಯ ಪರಿಸ್ಥಿತಿಗಳಿಗೆ ಅನ್ವಯವಾಗುತ್ತದೆ. ಹೇರಿಕೆ ಆದಾಗ ಇಂಥ ಯಂತ್ರಗಳು ಸಾಧಾರಣವಾಗಿ ಕೊಠಡಿ ಉಷ್ಣತೆಯಲ್ಲಿ ಇರಬೇಕು. ನಿರ್ದೇಶಿಸಿದ ಕಾಲಾವಧಿಯಲ್ಲಿ ಇವು ಸತತವಾಗಿ ನಿರ್ಧಾರಿತ ಹೇರಿಕೆಯನ್ನು ವಾಡಿಕೆಯ ಪರಿಮಿತಿಯನ್ನು ದಾಟದೇ ತಡೆದುಕೊಳ್ಳುತ್ತದೆ. 

	3. ನಾಮಕ ನಿರ್ಧಾರಣೆ (ನಾಮಿನಲ್ ರೇಟಿಂಗ್): ಯಂತ್ರವನ್ನು ಸ್ಥಿರೋಷ್ಣತೆಗೆ ತಂದು, ಇದು ಗರಿಷ್ಠ ಅಂಗೀಕಾರಾರ್ಹ ಬೆಲೆಯನ್ನು ದಾಟದೆಯೇ ಎರಡು ಗಂಟೆಯಷ್ಟು ಹೊತ್ತು ನಿರ್ದೇಶಿತ ವೋಲ್ಟೇಜಿನಲ್ಲಿ, ವಿದ್ಯುತ್ತು ಶೇಕಡ ಐವತ್ತರಷ್ಟು ಹೆಚ್ಚುವಂತೆ ಇರುವ ಹೇರಿಕೆಯನ್ನು ಸೂಚಿಸುವುದು ನಾಮಕ ನಿರ್ಧಾರಣೆ.

	4. ಎರಡು ಗಂಟೆ ಕಾಲ ಶೇಕಡ 25ರಷ್ಟು ಅತಿ ಹೇರಿಕೆಯನ್ನು ಹಾಕಿದರೂ ಗರಿಷ್ಠ ಅಂಗಿಕಾರಾರ್ಹ ಪರಿಮಿತಿಗಳನ್ನು ಉಷ್ಣತೆ ಏರದಂತೆ ಸತತವಾಗಿ ತಾಳಿಕೊಳ್ಳಬಲ್ಲ ಹೇರಿಕೆಗೆ ಶೇಕಡ 25ರಷ್ಟು ಅತಿ ಹೇರಿಕೆಯ 2 ಗಂಟೆಗಳ ಸತತ ನಿರ್ಧಾರಣೆ ಎಂದು ಹೆಸರು.

	ವಿದ್ಯುಜ್ಜನಕ ಮತ್ತು ಮೋಟಾರುಗಳ ನಿರ್ಧಾರಣೆ: ಜವ ಮತ್ತು ಉಷ್ಣತೆ ಸುರಕ್ಷಿತ ಪರಿಮಿತಿಗಳನ್ನು ದಾಟದಂತೆ ದಕ್ಷ ಕಾರ್ಯಾಚರಣೆಗೆ ಅನುಕೂಲವಾಗಿರುವ ಪರಿಸ್ಥಿತಿಗಳ ವಿವರಣೆಯೇ ವಿದ್ಯುಜ್ಜನಕದ ಪೂರ್ಣ ಹೇರಿಕೆಯ ನಿರ್ಧಾರಣೆ. ನಿರ್ದೇಶಿತ ವೋಲ್ಟೇಜ್ ಮತ್ತು ಜವದಲ್ಲಿ ನಿರ್ಧಾರಿತ ಲಭ್ಯ ಉತ್ಪತ್ತಿಯನ್ನು ಕಿಲೋವಾಟುಗಳಲ್ಲಿ ಅಥವಾ ಅಶ್ವ ಸಾಮಥ್ರ್ಯಗಳಲ್ಲಿ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ 150 V ಮತ್ತು 1200 R M(ಮಿನಿಟಿಗೆ ಆವರ್ತನೆಗಳು) ಜವದಲ್ಲಿ ನಿರ್ಧಾರಣೆ 30 ಏW ಎಂದು ಭಾವಿಸೋಣ. ಈ ಯಂತ್ರ 1200 rpm ಜವದಲ್ಲಿ ಓಡುತ್ತಿರುವಾಗ ಹಾಗೂ ಅಂತಿಮದಲ್ಲಿ (ಟರ್ಮಿನಲ್) 150 v ಗಳನ್ನು ಪ್ರದಾನ ಮಾಡುತ್ತಿರುವಾಗ ಉತ್ಪತ್ತಿಯಾಗುವ ವಿದ್ಯುತ್ತು 200 ಆಂಪೇರುಗಳು. ಯಂತ್ರದ ವಿವರಣ ಫಲಕದಲ್ಲಿ ಸೂಚಿಸಿರುವ ವಿದ್ಯುತ್ತಿನ ಬೆಲೆ ಇದೇ. ವಿದ್ಯುತ್ ಮೋಟಾರಿನ ಉತ್ಪತ್ತಿಗಿಂತ ಅದರ ನಿವೇಶ (ಇನ್‍ಪುಟ್) ಹೆಚ್ಚಾಗಿರುತ್ತದೆ. ಘರ್ಷಣೆ ಮತ್ತು ಉಷ್ಣ ನಷ್ಟದ ರೂಪದಲ್ಲಿ ಶಕ್ತಿಯ ಅಪವ್ಯಯವಾಗುವುದೇ ಇದರ ಕಾರಣ. ಉದಾಹರಣೆಗೆ 20 HP (ಅಶ್ವಸಾಮಥ್ರ್ಯ). 120 V ಮತ್ತು 800 ಖPಒ ಮೋಟಾರಿನ ದಕ್ಷತೆ 82.9% ಇದ್ದರೆ ನಿರ್ಧಾರಿತ ಹೇರಿಕೆಯಲ್ಲಿ ವಿದ್ಯುತ್ತು 150 ಆಂಪೇರುಗಳು ಇರುತ್ತದೆ. ಮೋಟಾರ್ ಮತ್ತು ವಿದ್ಯುಜ್ಜನಕಗಳ ನಿರ್ಧಾರಣೆಯನ್ನು ಬಾಧಿಸುವ ಮುಖ್ಯ ಕಾರಣಗಳು ತಾಪನ ಮತ್ತು ದಿಕ್ಪರಿವರ್ತನೆ (ಕಾಮ್ಯುಟೇಶನ್). ನಿರ್ಧಾರಣೆಯ ಬೆಲೆಗಳಿಗಿಂತ ಹೆಚ್ಚಿನ ಹೇರಿಕೆಯಲ್ಲಿ ಯಂತ್ರ ದೀರ್ಘ ಕಾಲ ಕಾರ್ಯನಿರ್ವಹಿಸುವಂತಾದರೆ ಉಷ್ಣತೆ ಏರಿ ವಿದ್ಯುತ್ ರೋಧಕ್ಕೆ ಶಾಶ್ವತ ಅಪಾಯ ತರಬಹುದು. ವಿಪರೀತ ಕಿಡಿಯುಂಟಾಗಿ ದಿಕ್ಪರಿವರ್ತಕ ಮತ್ತು ಬ್ರಶ್‍ಗಳು ಉರಿದು ಹಾಳಾಗಬಹುದು. ನಿರ್ಧಾರಣೆಯ ಮೇಲೆ ಪ್ರಭಾವ ಬೀರುವ ಇತರ ಅಂಶಗಳು ವಿದ್ಯುಜ್ಜನಕದಲ್ಲಿ ವೋಲ್ಟೇಜು ಕ್ರಮಗೊಳಿಸಿಕೆ ಮತ್ತು ಮೋಟರಿನಲ್ಲಿ ಜವ ಕ್ರಮಗೊಳಿಸಿಕೆ. ಸಾಮಾನ್ಯವಾಗಿ ವಿದ್ಯುಜ್ಜನಕಗಳಲ್ಲಿ ಪೂರ್ಣ ಹೇರಿಕೆ ಮತ್ತು ಶೂನ್ಯ ಹೇರಿಕೆಯ ವೋಲ್ಟೇಜುಗಳನ್ನೂ ಮೋಟರಿನಲ್ಲಿ ಪೂರ್ಣ ಹೇರಿಕೆ ಮತ್ತು ಶೂನ್ಯ ಹೇರಿಕೆಯ ಜವಗಳನ್ನೂ ಸೂಚಿಸುತ್ತಾರೆ.

	ಸಂಗ್ರಹಣ ಕೋಶಗಳು: ಕೆಲವು ನಿಶ್ಚಿತ ಕನಿಷ್ಠ ಅಥವಾ ಅಂತ್ಯ ಬೆಲೆಗಿಂತ ಕಡಿಮೆ ಬೆಲೆಗೆ ಅಂತಿಮ ವೋಲ್ಟೇಜ್ ಇಳಿಯುವ ಮುನ್ನ ಎಷ್ಟು ಕಾಲ ಕೋಶ ಆಂಪೇರ್-ಗಂಟೆಗಳನ್ನು ಸತತವಾಗಿ ತಲುಪಿಸಬಲ್ಲದು ಎಂಬ ಹೇಳಿಕೆಯೇ ಕೋಶದ ನಿರ್ಧಾರಣೆ. ಈ ಅಂತ್ಯ ವೋಲ್ಟೇಜ್ ಕೋಶ ಯಾವ ರೀತಿಯದು ಮತ್ತು ವಿಸರ್ಜನದರ. (ಡಿಸ್‍ಚಾರ್ಜ್ ರೇಟ್) ಹೇಗೆ ಎಂಬುದನ್ನು ಅನುಸರಿಸಿ ಬದಲಾಗುತ್ತದೆ. ಸ್ಥಾನಿಕ ರೀತಿಯ ಕೋಶಗಳಿಗೆ ನಿರ್ಧಾರಣೆ ಸಾಮಾನ್ಯವಾಗಿ 8 ಗಂಟೆಗಳ ವಿಸರ್ಜನ ದರವನ್ನು ಅವಲಂಬಿಸಿರುತ್ತದೆ. ವಾಹನ ಕೋಶವನ್ನು 6 ಗಂಟೆ ಆಧಾರದ ಮೇಲೆ ನಿರ್ಧರಿಸುತ್ತಾರೆ. 3, 5, 10 ಗಂಟೆಗಳ ಇತರ ಕಾಲವಧಿಯ ನಿರ್ಧಾರಣೆಗಳೂ ಬಳಕೆಯಲ್ಲಿವೆ. 320 ಆಂಪೇರ್-ಗಂಟೆ ಕೋಶಕ್ಕೆ 8 ಗಂಟೆಗಳ ವಿಸರ್ಜನ ಕಾಲವಿದ್ದರೆ ಅದು 40 ಆಂಪೇರುಗಳನ್ನು ಸತತವಾಗಿ 8 ಗಂಟೆಗಳ ಕಾಲ ಪ್ರದಾನ ಮಾಡಿ 1.75 ಗಿ ಅಂತ್ಯ ಬೆಲೆಯನ್ನು ಮುಟ್ಟುತ್ತದೆ. ಆದರೆ, ವಿಸರ್ಜನ ಕಾಲಾವನ್ನು 3 ಗಂಟೆಗಳಿಗೆ ಇಳಿಸಿದರೆ, ಕೋಶದ ಉತ್ಪತ್ತಿ 3 ಗಂಟೆಗಳು 80 ಆಂಪೇರಿನಂತೆ ಇರುತ್ತದೆ. (240 ಆಂ.ಗಂ). ಅಂದರೆ ಅಧಿಕ ದರದಲ್ಲಿ ಕೋಶದ ಉತ್ಪತ್ತಿ ತಗ್ಗುತ್ತದೆ. 

	ಪರಿವರ್ತಕ: ಇದರ ನಿರ್ಧಾರಣೆಯಲ್ಲಿ ಮೀರದಿರಬೇಕಾದ ಮುಖ್ಯ ಅಂಶಗಳು ಉಷ್ಣತೆ, ವಿದ್ಯುತ್‍ರೋಧ ಮುಂತಾದವು. ಹಾನಿ ಮತ್ತು ಶೀತನ ಅನುಕೂಲತೆಗಳಿಂದ ಉಷ್ಣತೆಯ ಏರಿಕೆಯನ್ನು ನಿರ್ಧರಿಸಬಹುದು. ಬಳಸಿಕೊಂಡ ವೋಲ್ಟೇಜ್ ಮತ್ತು ಆವರ್ತಾಂಕವನ್ನು ಅವಲಂಬಿಸಿ ದಿಂಡಿನ ಹಾನಿ ಉಂಟು. ತಾಮ್ರಹಾನಿ ಹೇರಿಕೆಯ ವಿದ್ಯುತ್‍ನ್ನು ಅವಲಂಬಿಸಿದೆ. ಆದ್ದರಿಂದ ಇಲ್ಲಿ ನಿರ್ಧಾರಣೆ ಉತ್ಪತ್ತಿ, ವೋಲ್ಟೇಜ್ ಮತ್ತು ಆವರ್ತಾಂಕ ಇವನ್ನು ಸೂಚಿಸುತ್ತದೆ. ಉತ್ಪತ್ತಿಯನ್ನು ಸಾಮಾನ್ಯವಾಗಿ ಕಿಲೋವಾಟ್-ಆಂಪೇರುಗಳಲ್ಲಿ ಹೇಳುವರು. ಂ ತರಗತಿಯ ರೋಧಕಕ್ಕೆ 55ºಅಯಷ್ಟು ಉಷ್ಣತೆಯ ಏರಿಕೆ ಶಿಷ್ಟವಾದದ್ದೆಂದು ತಿಳಿಯಬಹುದು.

	ಪರ್ಯಾಯಕ (ಆಲ್ಟರ್ನೇಟರ್): ಪರ್ಯಾಯ ವಿದ್ಯುಜ್ಜನಕಗಳ ನಿರ್ಧಾರಣೆ ಸರಣಿಯ ಪ್ರಾವಸ್ಥೆ (ಫೇಸ್), ಜವ, ವೋಲ್ಟೇಜ್, ಆವರ್ತಾಂಕ ಮತ್ತು ಅಂತಿಮದಲ್ಲಿ ಲಭ್ಯವಿರುವ ಕಿಲೋವೋಲ್ಟ್ ಆಂಪೇರುಗಳು ಇವನ್ನು ಸೂಚಿಸುತ್ತದೆ. ಅಂಗೀಕಾರಾರ್ಹ ಉಷ್ಣತೆಯ ಏರಿಕೆ ಸಾಮಾನ್ಯವಾಗಿ 50ºಅ. ಉಷ್ಣ ತಡೆಯಬಲ್ಲ ವಿಶೇಷ ರೋಧಕವನ್ನು ಉಪಯೋಗಿಸಿದಾಗ ಈ ಪರಿಮಿತಿಯನ್ನು ಹೆಚ್ಚಿಸಬಹುದು.

	ಅಂತರ್ದಹನ ಎಂಜಿನ್: ಎಂಜಿನ್ನುಗಳ ನಿರ್ಧಾರಣ ಸಾಮಥ್ರ್ಯವನ್ನು ಮುಖ್ಯವಾಗಿ ಮೂರು ಪದ್ಧತಿಗಳಲ್ಲಿ ತಿಳಿಸಬಹುದು: 1. ಎಂಜಿನ್ ಸತತವಾಗಿ ತಾಳಿಕೊಳ್ಳಬಲ್ಲ ಗರಿಷ್ಠ ಹೇರಿಕೆ: 2. ಎಂಜಿನ್ ಉತ್ಪಾದಿಸುವ ಗರಿಷ್ಠ ಸಾಮಥ್ರ್ಯ. 3. ಯಾದೃಚ್ಛಿಕ ಸೂತ್ರದಿಂದ ಪಡೆಯುವ ಬೆಲೆ.

	ಗರಿಷ್ಠ ಸತತ ಹೇರಿಕೆಯನ್ನು ಅನೇಕ ರೀತಿಗಳಲ್ಲಿ ಪಡೆಯಬಹುದು. ಸಹಜ ಪೂರ್ಣ ಹೇರಿಕೆಯನ್ನು ಮಧ್ಯಕ ಪ್ರಭಾವಿ ಒತ್ತಡವನ್ನು ಅವಲಂಬಿಸಿ ಪಡೆಯುವುದು ಒಂದು ವಿಧ. ಕೊಂತದ ಸ್ಥಾನ ಪಲ್ಲಟದಿಂದಲೂ ಎಂಜಿನ್ನಿನ ನಿರ್ಧಾರಣೆ ಸಾಧ್ಯ. ಇದರಲ್ಲಿ ಗಾತ್ರವನ್ನು ಅಅ/ಊP/seಛಿ ಮಾನದಲ್ಲಿ ತಿಳಿಸಲಾಗುವುದು. ಇದು ಮೂಲಭೂತವಾಗಿ ಮಧ್ಯಕ ಪ್ರಭಾವಿ ಒತ್ತಡದ ನಿರ್ಧಾರಣೆಗೆ ಸಮ. ಉದಾಹರಣೆಗೆ 80 ಅu.iಟಿ/seಛಿ/ಊP ಸ್ಥಾನಪಲ್ಲಟ ಹೆಚ್ಚು ಕಡಿಮೆ 80 PSI ಮಧ್ಯಕ ಪ್ರಭಾವಿ ನಿರ್ಧಾರಣೆಯನ್ನೇ ಕೊಡುತ್ತದೆ. ಎಂಜಿನ್ ಉತ್ಪಾದಿಸುವ ಗರಿಷ್ಠ ಸಾಮಥ್ರ್ಯವೂ ನಿರ್ಧಾರಣೆಗೆ ಆಧಾರವಾಗುವುದುಂಟು ಎಂದು ಈಗಾಗಲೇ ಹೇಳಲಾಗಿದೆ. ಆದರೆ, ಗರಿಷ್ಠ ಸಾಮಥ್ರ್ಯವನ್ನು ಎಂಜಿನ್ ಸತತವಾಗಿ ಉತ್ಪಾದಿಸುವುದಿಲ್ಲ. ಸ್ವಯಂಚಲಿಗಳ (ಆಟೋಮೊಬೀಲ್ಸ್) ಎಂಜಿನ್ನುಗಳಲ್ಲಿ ಗರಿಷ್ಠ ಸಾಮಥ್ರ್ಯ ಉತ್ಪಾದನೆ ಸತತವಾಗಿ ಇರಬೇಕಾದುದಿಲ್ಲ. ಇಂಥ ಸಂದರ್ಭಗಳಲ್ಲಿ ಈ ಆಧಾರದ ನಿರ್ಧಾರಣೆ ಉಪಯೋಗಕರ. ಕೆಲವು ವೇಳೆ ಸಣ್ಣ ಸ್ಥಾನಿಕ ಹಾಗೂ ಟ್ರ್ಯಾಕ್ಟರ್ ಎಂಜಿನ್ನುಗಳಲ್ಲಿ ಹೆಚ್ಚಿನ ಹೇರಿಕೆಗೆ ಶೇಕಡ 10 ಒಟ್ಟು ಗರಿಷ್ಠ ಅಶ್ವ ಸಾಮಥ್ರ್ಯದ ಶೇಕಡ 90ರ ಬೆಲೆಯನ್ನು ನಿರ್ಧಾರಣೆಯ ಅಶ್ವಸಾಮಥ್ರ್ಯ ಎಂದು ವ್ಯವಹರಿಸುತ್ತಾರೆ.

	ವಿಮಾನ ಎಂಜಿನ್ನುಗಳಲ್ಲಿ ಮೇಲ್ದೂಡಿಕೆ ಸಾಮಥ್ಯ್ (ಟೇಕ್ ಆಫ್ ಪವರ್). ನಿರ್ಧಾರಣ ಸಾಮಥ್ರ್ಯ ಮತ್ತು ಪ್ರಯಾಣ ಸಾಮಥ್ರ್ಯ ಎಂಬ ಮೂರು ಬಗೆಯ ನಿರ್ಧಾರಣೆಗಳುಂಟು. ಐದು ಮಿನಿಟುಗಳನ್ನು ಮೀರದ ಅಲ್ಪಾವಧಿಯಲ್ಲಿ ಎಂಜಿನ್ ಉತ್ಪಾದಿಸುವ ಗರಿಷ್ಠ ಸಾಮಥ್ರ್ಯವೇ ಮೇಲ್ದೂಡಿಕೆ ಸಾಮಥ್ರ್ಯ. ವಿಸ್ತರಿಸಿದ ಕಾರ್ಯಾಚರಣೆಯಲ್ಲಿ ಉಪಯೋಗಿಸುವ ಗರಿಷ್ಠ ಸಾಮಥ್ರ್ಯವೇ ನಿರ್ಧಾರಣ ಸಾಮಥ್ರ್ಯ ಇದು ಮೇಲ್ದೂಡಿಕೆ ಸಾಮಥ್ರ್ಯದ ಬೆಲೆಯ ಶೇಕಡ 85ರಿಂದ 90ರಷ್ಟಿರುತ್ತದೆ. ಮಟ್ಟಸ ಹಾರಾಟದ ಕಾರ್ಯಾಚರಣೆಯಲ್ಲಿ ಉಪಯೋಗಿಸುವ ಸಾಮಥ್ರ್ಯವೇ ಪ್ರಯಾಣ ಸಾಮಥ್ರ್ಯ. ಇದು ನಿರ್ಧಾರಣ ಸಾಮಥ್ರ್ಯದ ಶೇಕಡ 70 ಅಥವಾ ಇನ್ನೂ ಕಡಿಮೆ ಇರುತ್ತದೆ.

	ಎಂಜಿನ್ನುಗಳನ್ನು ಹೋಲಿಸಲು ಅಥವಾ ಅವುಗಳ ಮೇಲೆ ತೆರಿಗೆ ವಿಧಿಸಲು ನಾಮಕ ಅಶ್ವ ಸಾಮಥ್ರ್ಯವನ್ನು ನಿರ್ಧಾರಣೆಯಾಗಿ ಬಳಸುವುದುಂಟು. ಅಮೆರಿಕದ ನ್ಯಾಷನಲ್ ಆಟೋಮೊಬೀಲ್ ಚೇಂಬರ್ ಆಫ್ ಕಾಮರ್ಸ್ ಸೂತ್ರದಂತೆ 4 ಘಾತಗಳ ಎಂಜಿನ್ನಿನ ನಾಮಕ ಅಶ್ವ ಸಾಮಥ್ರ್ಯ 0.4 iಜ2 ಅಥವಾ ಕಡಿಮೆ. ಇಲ್ಲಿ i ಸಿಲಿಂಡರುಗಳ ಸಂಖ್ಯೆ ಮತ್ತು ಜ ಇಂಚುಗಳಲ್ಲಿ ಕೊಂತದ ವ್ಯಾಸ. ಇದಕ್ಕೆ ಆಧಾರ 67.2 PSI ಮಧ್ಯಕ ಪ್ರಭಾವಿ ಒತ್ತಡ ಮತ್ತು 1000 ಈPಒಗಳ ಕೊಂತ ಜವ. 

	ಸಾಮಾನ್ಯ ಕಾರ್ಯಾಚರಣೆಗಳಿಗಾಗಿ ಬಳಸುವ ಸ್ತಿರ ಜವದ ಅಂತರ್ದಹನ ಎಂಜಿನ್ನುಗಳಿಗೆ ಭಾರತದ ISI ಸಂಸ್ಥೆ ಕೆಳಗಿನ ನಿರ್ಧಾರಣೆಯನ್ನು ವಿಧಿಸಿದೆ. 

	ಮಧ್ಯಕ ಭಾರ ಮಾಪಿಯ ಒತ್ತಡ, ಸಮುದ್ರಮಟ್ಟಕ್ಕೆ 300 ಮೀಟರ್ ಮೇಲಿನ ಎತ್ತರಕ್ಕೆ ಸಂಬಂಧಿಸಿದ 736 ಮಿ.ಮೀ ಪಾದರಸ. ಒಳತೆಗೆದುಕೊಳ್ಳುವ ವಾಯುವಿನ ಉಷ್ಣತೆ 35ºಅ . ಆದ್ರ್ರತೆ 35ºಅ ಯಲ್ಲಿ 65% ಸಾಪೇಕ್ಷ ಆದ್ರ್ರತೆಗೆ ಸಂಬಂಧಿಸಿದ 27.4 ಮಿ.ಮೀ. ಪಾದರಸದ ನೀರಿನ ಬಾಷ್ಪ ಒತ್ತಡ.
(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ